ಟೀಕಾಕಾರರಿಗೆ ಅಭಿವೃದ್ಧಿ ಕಾರ್ಯಗಳ ಮೂಲಕ ತಕ್ಕ ಉತ್ತರ ನೀಡುತ್ತಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ವಿವಿಧಡೆ ರೂ.1.20 ಕೋಟೆ ವೆಚ್ಚದ ರಸ್ತೆ ಮತ್ತು ವಿವಿಧ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಚಾಲನೆ ನೀಡಿ ಕೆಲ್ಲೂರು ಗ್ರಾಮದಲ್ಲಿ ಅವರು ಮಾತನಾಡಿದರು. ತಾಲೂಕಿನ ಹಲವು ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಶಾಸಕನಾಗಿ ಆಯ್ಕೆಯಾದ ನಂತರ ಅಗತ್ಯಕ್ಕನುಗುಣವಾಗಿ ಸರ್ಕಾರದಿಂದ ಅನುದಾನ ತಂದು ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ಒಂದೇ ಬಾರಿಗೆ ಗ್ರಾಮಗಳಲ್ಲಿನ ಎಲ್ಲಾ ಸೌಕರ್ಯಗಳ ಕೊರತೆ ನೀಗಿಸುವುದು ಕಷ್ಟಕರ. ತಾಲೂಕಿನ ಎಲ್ಲಾ ಹಳ್ಳಿಗಳ ಸಮಸ್ಯೆಗಳನ್ನು ಅಧಿಕಾರಿಗಳಿಂದ ಪಟ್ಟಿತಯಾರಿಸಿ ಹಂತಹAತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಪಕ್ಷಾತೀತವಾಗಿ ಪ್ರಮಾಣಿಕ ಕೆಲಸ ನಿರ್ವಹಿಸುತ್ತಿದ್ದು ತಾಲೂಕಿನ ಜನತೆ ಸಹಕರಿಸಬೇಕು ಎಂದರು.
ತಾಲೂಕಿನಲ್ಲಿ ಈ ಹಿಂದೆ ಶಾಸಕರಾಗಿದ್ದವರು ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡದ ಪರಿಣಾಮ ಒಂದೇ ಬಾರಿಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದು ಕಷ್ಟಕರ ವಿಚಾರ. ತಾಲೂಕಿನ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಆಗಿದ್ದು, ಸರ್ಕಾರದಿಂದ ಅನುದಾನ ತರುವ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ ಎಂದರು.
ಈ ವೇಳೆ ಕಿರಂಗೂರು, ಹರೀನಹಳ್ಳಿ, ಕುಡಕೂರು, ಆರ್.ಹರಳಹಳ್ಳಿ, ಕೆಲ್ಲೂರು, ಆರ್.ಹೊಸಹಳ್ಳಿ ಗ್ರಾಮಗಳಲ್ಲಿ ಪರಿಶಿಷ್ಟ ಕಾಲೋನಿಗಳ ಸಿಮೆಂಟ್ ರಸ್ತೆ ಹಾಗೂ ಗ್ರಾಮ ಪರಿಮಿತಿ ರಸ್ತೆಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭ ತಾ.ಪಂ. ಇಓ ಶೃತಿ, ಜಿ.ಪಂ. ಮಾಜಿ ಸದಸ್ಯ ಶಿವಣ್ಣ, ತಾ.ಪಂ. ಮಾಜಿ ಅಧ್ಯಕ್ಷ ಮಾಕೋಡು ಜವರಪ್ಪ, ಕೆಲ್ಲೂರು ಗ್ರಾ.ಪಂ.ಸದಸ್ಯರಾದ ಸರಸ್ವತಿ ದೇವರಾಜ್, ಜವರೇಶ್, ಹಾಲು ಉತ್ಪದಕರ ಸಹಕಾರ ಸಂಘದ ಅಧ್ಯಕ್ಷ ರಾಜೇಗೌಡ, ಮುಖಂಡರಾದ ಅಣ್ಣಯ್ಯಶೆಟ್ಟಿ, ಪ್ರೇಮ್, ಶಿವಣ್ಣ, ಮಹದೇವ್, ರವೀಶ್, ಯಜಮಾನ್ ಪುಟ್ಟಸೋಮಾರಾಧ್ಯ, ಯಜಮಾನಯ್ಯ, ಭಾಸ್ಕರ್, ಲೋಕೋಪಯೋಗಿ ಎಇಇ ನಾಗರಾಜ್, ಪಿಆರ್‌ಇಡಿ ಎಇಇ ಪ್ರಭು, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ತರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top