
ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಬೈಲಕುಪ್ಪೆ ಟಿಬೆಟಿಯನ್ ಗೋಲ್ಡನ್ ಟೆಂಪಲ್ ವತಿಯಿಂದ ನೀಡಿದ 400 ಆಹಾರ ಕಿಟ್ ನ್ನು ಬಡವರಿಗೆ ವಿತರಿಸಿ ಅವರು ಮಾತನಾಡಿದರು, ತಾಲೂಕು ಆಡಳಿತ ಮತ್ತು ನನ್ನ ವೈಯಕ್ತಿಕ ಕೋರಿಕೆಯ ಮೇರೆಗೆ ಟಿಬೆಟ್ ಕ್ಯಾಂಪ್ ನ ವಿವಿಧ ಧರ್ಮ ಗುರುಗಳು ಸ್ಪಂದಿಸಿ ಬೈಲುಕುಪ್ಪೆ ಬಳಿಯ ಗ್ರಾಮಗಳು ಸೇರಿದಂತೆ ತಾಲೂಕಿನ ವಿವಿಧೆಡೆಯ ಸಾವಿರಾರು ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ತೋರಿದ್ದಾರೆ ಮತ್ತು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಸಂದಾಯ ಮಾಡಿ ನಿರಾಶ್ರಿತರಾಗಿ ಆಗಮಿಸಿದ ಸಂದರ್ಭ ಆಶ್ರಯ ನೀಡಿದ ಭಾರತ ಹಾಗೂ ಕರ್ನಾಟಕಕ್ಕೆ ಋಣಿಯಾಗಿದ್ದಾರೆ ಇವರ ಈ ಸಾಮಾಜಿಕ ಸೇವಾ ಮನೋಭಾವ ಶ್ಲಾಘನೀಯ ಎಂದರು.
ಈ ಸಂದರ್ಭ ಗೋಲ್ಡನ್ ಟೆಂಪಲ್ ಕಾರ್ಯದರ್ಶಿ ಗುರು ಲೋಫಾನ್, ಗ್ರಾ.ಪಂ ಅದ್ಯಕ್ಷ ಆಸೀಫ್ ಖಾನ್, ಉಪಾಧ್ಯಕ್ಷೆ ಲಕ್ಷ್ಮಿ ಮತ್ತಿತರರು ಹಾಜರಿದ್ದರು.