
ತಾಲೂಕಿನ ಹೋಬಳಿ ಕೇಂದ್ರ ಹಾರನಹಳ್ಳಿ ಹಾಗೂ ಅಂಬ್ಲಾರೆ ಗ್ರಾಮಗಳಲ್ಲಿ ತಲಾ 70ಲಕ್ಷ ವೆಚ್ಚದ ಒಟ್ಟು 1.40ಕೋಟಿ ವೆಚ್ಚದ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಶಾಸಕನಾಗಿ ಆಯ್ಕೆಯಾದ ನಂತರ ಗ್ರಾಮ ಠಾಣೆ ಸ್ಥಳ, ಕೆರೆ, ಸ್ಮಶಾನ ಹಾಗೂ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವವರು ತೆರವುಗೊಳಿಸುವಂತೆ ಸೂಚಿಸಿದ್ದೇನೆ, ಆದರೆ ಕೆಲವರು ಇದನ್ನೇ ಮುಂದಿಟ್ಟು ಶಾಸಕರು ದ್ವೇಷದ ರಾಜಕಾರಣ ಮಾಡುತ್ತಿದ್ದು ಕಾಂಗ್ರೆಸ್ ನವರ ವಿರುದ್ಧ ಕೆಲಸ ಹಾಗೂ ಅಧಿಕಾರಿಗಳು ಶಾಸಕರ ಸೂಚನೆಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ತಪ್ಪು ಭಾವನೆ, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣಿಗಳಿಗೆ ಬದ್ಧತೆ ಇರಬೇಕು, ಈ ಹಿಂದೆ ತಾಲೂಕಿನಲ್ಲಿ ಆಡಳಿತ ನಡೆಸಿದ ಎಲ್ಲ ಶಾಸಕರುಗಳು ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿಲ್ಲ, ಕಳೆದ ಎರಡು ಬಾರಿ ಸೋತು 3ನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ಮೇಲೆ ಕ್ಷೇತ್ರದ ಜನತೆಗೆ ಒಳ್ಳೆಯ ಅಭಿವೃದ್ಧಿ ಕೆಲಸ ನೀಡುವ ಆಸೆ ಇತ್ತು ಆದರೆ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರನ್ನು ಸಮ್ಮಿಶ್ರ ಸರ್ಕಾರದ ಅಂಗವಾಗಿದ್ದ ಕಾಂಗ್ರೆಸ್ ಪಕ್ಷದವರೇ ಕಾಲೆಳೆದು ಅಧಿಕಾರದಿಂದ ಕೆಳಗಿಳಿಸಿದ ರಿಂದ ಅಭಿವೃದ್ಧಿಗೆ ಸ್ವಲ್ಪ ಹಿನ್ನಡೆ ಆಯಿತು ಬಿಜೆಪಿ ಸರ್ಕಾರ ರಚನೆಯಾದಾಗಲೂ ತಾಲೂಕಿಗೆ ಅನುದಾನ ತರಲು ಹೆಚ್ಚು ಶ್ರಮಿಸಿದೆ, ಕ್ಷೇತ್ರದ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ವಾಭಿಮಾನ ಮರೆತು ಕರ್ತವ್ಯ ನಿರ್ವಹಿಸಿದ್ದೇನೆ, ರಾಜಕಾರಣ ಶಾಶ್ವತವಲ್ಲ ಆದರೆ ಅಧಿಕಾರಾವಧಿಯಲ್ಲಿ ಉತ್ತಮ ಕೆಲಸ ನಿರ್ವಹಿಸಿ ಜನಮಾಸದಲ್ಲಿ ಉಳಿಯಬೇಕು, ಈ ಹಿಂದೆ ತಾಲೂಕಿನಲ್ಲಿ ಶಾಸಕರಾಗಿದ್ದವರು ಜನರಿಗೆ ಒಳಿತಾಗುವ ಕೆಲಸ ಮಾಡಲಿಲ್ಲ ನಾನು ಜನರ ಒಳಿತಿಗೆ ಕೆಲಸ ಮಾಡುತ್ತಿದ್ದು ಸಹಕರಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಹಾರನಹಳ್ಳಿ ಹೋಬಳಿ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕರು ಉದ್ಘಾಟಿಸಿದರು.
ಈ ಸಂದರ್ಭ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಸಹಾಯಕ ನಿರ್ದೇಶಕ ರಘುನಾಥ್, ಜಿ.ಪಂ ಸದಸ್ಯೆ ರುದ್ರಮ್ಮ ನಾಗಯ್ಯ, ತಾ.ಪಂ ಸದಸ್ಯೆ ಸುಮಿತ್ರಾ ನಾಗರಾಜ್, ಮಾಜಿ ಸದಸ್ಯರಾದ ಶಂಕರೇಗೌಡ, ರಘುನಾಥ್, ಪಿಡಬ್ಲ್ಯುಡಿ ಇಲಾಖೆ ನಾಗರಾಜ್, ಎಇ ಬೋರೇಗೌಡ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಎಇಇ ಪ್ರಭು, ಗ್ರಾಮೀಣ ಕುಡಿಯುವ ನೀರು ಯೋಜನೆ ಎಇಇ ಶಿವಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.