ಜೆಡಿಎಸ್ ಪಕ್ಷದ ಆಧಾರಸ್ತಂಭ ಗುಣಮುಖರಾಗಲೆಂದು ಶಕ್ತಿ ದೇವತೆಯ ಪೂಜೆ ಸಲ್ಲಿಸಿದ ಶಾಸಕ ಕೆ.ಮಹದೇವ್ ಹಾಗು ನಿಖಿಲ್ ಸೈನ್ಯೆ ಸಮಿತಿ ಪಿರಿಯಾಪಟ್ಟಣ 04/04/2021

ತಾಲ್ಲೂಕಿನ ಶಕ್ತಿ ದೇವತೆ ಕನ್ನಂಬಾಡಿ ಅಮ್ಮನವರ ದೇವಸ್ಥಾನದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ದೇವೇಗೌಡರು ಉಸಿರಾಟದ ಸಮಸ್ಯೆಯಿಂದ ಬಳಲುತಿರುವುದು ಹಾಗೂ ಅವರ ಪತ್ನಿ ಶ್ರೀಮತಿ ಚನ್ನಮ್ಮ ರವರು ಕೊರೊನ ಸೋಂಕಿನ ಸಮಸ್ಯೆಯಿಂದ ಬೇಗ ಗುಣ್ಣಮುಖರಾಗಿ ಬರಲಿ ಎಂದು ತಾಲ್ಲೂಕಿನ ಶಾಸಕ ಕೆ.ಮಹದೇವ್ ಹಾಗು ನಿಖಿಲ್ ಸೈನ್ಯ ಸಮಿತಿ ಪಿರಿಯಾಪಟ್ಟಣದ ಎಲ್ಲಾ ಪದಾಧಿಕಾರಿಗಳಿಂದ ವಿಶೇಷ ಪೂಜೆ ಸಲಿಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮಾನ್ಯ ಮಾಜಿ ಪ್ರದಾನ ಮಂತ್ರಿಗಳು ಆದ ಹೆಚ್.ಡಿ.ದೇವೇಗೌಡ ರವರು ಹಾಗು ಶ್ರೀಮತಿ ಚೆನ್ನಮ್ಮ ರವರು ಆದಷ್ಟು ಬೇಗ ಗುಣಮುಖರಾಗಬೇಕು ಎಂದು ನಿಖಿಲ್ ಸೈನ್ಯ ಸಮಿತಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ. ತಾಲ್ಲೂಕಿನ ಶಕ್ತಿ ದೇವೇತಗಳಾದ ಶ್ರೀ ಮಸಣಿಕಮ್ಮ ಹಾಗು ಶ್ರೀ ಕನ್ನಂಬಾಡಿ ಅಮ್ಮ ನವರ ಅನುಗ್ರಹ ಸದಾ ನಮ್ಮ ಪಕ್ಷದ ಆಧಾರಸ್ತಂಭವಾದ ಮಾಜಿ ಪ್ರಧಾನ ಮಂತ್ರಿಗಳಾದ ದೇವೇಗೌಡರು ಹಾಗು ಶ್ರೀಮತಿ ಚೆನ್ನಮ್ಮರವರ ಮೇಲೆ ಇರಲಿ ಎಂದು ಬೇಡಿಕೊಂಡಿದ್ದೇನೆ ಎಂದರು.


ಪೂಜಾ ಕಾರ್ಯಕ್ರಮದಲ್ಲಿ ನಿಖಿಲ್ ಸೈನ್ಯ ಸಮಿತಿಯ ಗೌರವಾಧ್ಯಕ್ಷರಾದ ಮಧುಸೂಧನ್ ಗೌಡ, ತಾಲ್ಲೋಕು ಅಧ್ಯಕ್ಷರು ಅದ ಸಂತೋಷ್ ಗೌಡ, ಕಾರ್ಯದರ್ಶಿ ನವೀನ್ ಕುಮಾರ್. ಸ್ವಾಮಿ ಗೌಡ. ವಿನೋದ್, ದಿನೇಶ್, ಧನಂಜಯ, ಸ್ವಾಮಿ, ಸುಬ್ಬು, ಪುನೀತ್, ಮುತ್ತುರಾಜು. ಹಂಸ ,ಗಣೇಶ್, ಭರತ,ವೆಂಕಟೇಶ್ ಹಾಗು ಮತ್ತಿತರರು ಹಾಜರಿಗಿದರು…

Leave a Comment

Your email address will not be published. Required fields are marked *

error: Content is protected !!
Scroll to Top