ಪಿರಿಯಾಪಟ್ಟಣದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವತಿಯಿಂದ ಶಿಕ್ಷಕರ ಮಕ್ಕಳಿಗೆ ಹಾಗೂ ಪೋಷಕರಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಕೆ.ಮಹದೇವ್ ನೆರವೇರಿಸಿದರು. 01/01/2022

ಪಿರಿಯಾಪಟ್ಟಣ: ತಾಲ್ಲೂಕಿನಲ್ಲಿ ಗುರುಭವನ ನಿರ್ಮಾಣಕ್ಕೆ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರೆಲ್ಲರೂ ಸಂಘಟಿತರಾಗಿ ಶೀಘ್ರ ಕಾರ್ಯಪ್ರವೃತ್ತರಾಗುವಂತೆ ಶಾಸಕ ಕೆ.ಮಹದೇವ್ ತಿಳಿಸಿದರು.ಪಟ್ಟಣದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರಿಗೆ ಐಡಿಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಗುರುಭವನ ನಿರ್ಮಾಣ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಕಾಮಗಾರಿ ಶೀಘ್ರ ಪ್ರಾರಂಭಿಸಿ ಸಂಘದ ಚಟುವಟಿಕೆಗಳಿಗೆ ಬಳಸುವ ಅವಶ್ಯಕತೆಯಿದೆ ಆದ್ದರಿಂದ ಶಿಕ್ಷಕರು ಒಗ್ಗಟ್ಟಿನಿಂದ ಇದರ ನಿರ್ಮಾಣಕ್ಕೆ ಮುಂದಾದರೆ ಸಹಕಾರ ನೀಡಲಾಗುವುದು, ಅಲ್ಲದೆ ಶಿಕ್ಷಕರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದರು. 

ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರು ಮಾತನಾಡಿ ಸರ್ಕಾರದ ಚಿಂತನೆಗಿಂತಲೂ ಮೊದಲೇ ಶಿಕ್ಷಕರಿಗೆ ಐಡಿ ಕಾರ್ಡ್ ವಿತರಿಸಲು ಸಹಕಾರ ನೀಡಿದ ಶಾಸಕರು ಹಾಗೂ ಅವರ ಪುತ್ರ ಪ್ರಸನ್ನ ಅವರ  ಕಾರ್ಯ ಶ್ಲಾಘನೀಯ, ಶಿಕ್ಷಕರು ಧನಾತ್ಮಕ ಅಭಿವದ್ಧಿ ಹಾಗೂ ಚಿಂತನಶೀಲ ಮನಸ್ಸು ಹೊಂದಿದ್ದರೆ ಪ್ರಗತಿ ಸಾಧ್ಯ ಎನ್ನುವುದಕ್ಕೆ ತಾಲ್ಲೂಕಿನ ಅತ್ತಿಗೋಡು  ಸರ್ಕಾರಿ ಪ್ರೌಢಶಾಲೆ ಕಾರ್ಯಚಟುವಟಿಕೆ ಮಾದರಿಯಾಗಿದೆ, ಶಿಕ್ಷಕರ ಸವತಲತ್ತು ಯೋಗಕ್ಷೇಮದ ವಿಚಾರದಲ್ಲಿ ನಾನು ಹಿಂದೆ ಉಳಿಯದೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರು ಮಾತನಾಡಿ ಮೈಮೂಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಸಹಕಾರದಿಂದ ಎಲ್ಲಾ ಶಿಕ್ಷಕರಿಗೆ ಐಡಿಕಾರ್ಡ್ ನೀಡಲಾಗಿದೆ, ಅಲ್ಲದೆ ನಿವೃತ್ತ ಶಿಕ್ಷಕರನ್ನು ಸಂಘದ ವತಿಯಿಂದ ಶಾಲೆಗೆ ತೆರಳಿ ಸನ್ಮಾನಿಸಲಾಗುತ್ತಿದೆ, ಪ್ರತಿತಿಂಗಳು ಶಿಕ್ಷಕರು ಪಡೆಯುವ ಸಂಬಳ ಅದರ ಭತ್ಯಗಳ ವಿವರವನ್ನು ವರ್ಷಕ್ಕೆ ೨೦ ಸಾವಿರ ರೂ ವೆಚ್ಚದಲ್ಲಿ ಪ್ರತಿತಿಂಗಳು ಶಿಕ್ಷಕರಿಗೆ ಎಸ್‌ಎಂಎಸ್ ಮೂಲಕ ವಿವರ ತಲುಪುವಂತೆ ಮಾಡಲಾಗುತ್ತಿದೆ, ಮಹಿಳಾ ದಿನಾಚರಣೆ ಮಾಡಲಾಗಿದ್ದು ಗುರುಭವನ ನಿರ್ಮಾಣಕ್ಕೆ ಎಲ್ಲಾ ಶಿಕ್ಷಕರು ಒಗ್ಗಟ್ಟಿನಿಂದ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು. 

ಮೈಮೂಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಮಾತನಾಡಿ ಗುರುಭವನ ನಿರ್ಮಾಣಕ್ಕೆ ಶಾಸಕ ಕೆ.ಮಹದೇವ್ ರೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಇದೇ ವೇಳೆ ಗುರುಭವನ ನಿರ್ಮಾಣದ ಜಾಗದ ಈಸ್ವತ್ತು ಪ್ರತಿಯನ್ನು ಪುರಸಭಾ ಅಧ್ಯಕ್ಷ ಮಂಜುನಾಥ್‌ಸಿಂಗ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಿಗೆ ನೀಡಿದರು, ಶಿಕ್ಷಕರಿಗೆ ಐಡಿಕಾರ್ಡ್ ವಿತರಣೆ, ಪ್ರಾಥಮಿಕ ಶಾಲಾ ಪತ್ತಿನ ಸಹಕಾರದ ಸಂಘದ ಕ್ಯಾಲೆಂಡರ್ ಬಿಡುಗಡೆ, ಹಾಗೂ ಶಿಕ್ಷಕರ ಮಕ್ಕಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು.

 ಈ ಸಂದರ್ಭ ಬಿಇಒ ವೈ.ಕೆ ತಿಮ್ಮೇಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕ್ಷರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಮೂರ್ತಿ, ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ದೇವರಾಜು, ಸರ್ಕಾರಿ  ನೌಕರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹದೇವಪ್ಪ, ದೇವರಾಜು, ಯುವರಾಜ್, ಸೋಮಶೇಖರ್, ಮಧುರೇಶ್, ಅಶೋಕ್, ಅನಿತಾ, ಕುಮಾರಿ, ನಿಲ್ಲೂಫರ್, ವಿದ್ಯಾ, ಚಿಕ್ಕೇಗೌಡ, ಮಹದೇವ್, ಜಾವಿದ್‌ಪಾಷ, ಲೋಕೇಶ್, ಎಂ.ಕೆ.ಸುರೇಶ್, ಕೃಷ್ಣನಾಯಕ್ ಸೇರಿದಂತೆ ಮತ್ತಿತರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top