ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಲೋಕಾರ್ಪಣೆ 03/01/2022

ಪಿರಿಯಾಪಟ್ಟಣ : ಮೈಮುಲ್ ನಿರ್ದೇಶಕನಾಗಲು ಅಡ್ಡಗಾಲು ಹಾಕುತ್ತಿದ್ದ ವಿರೋಧಿಗಳಿಗೆ ಅಭಿವೃದ್ಧಿ ಕಾರ್ಯಗಳ ಮೂಲಕ ಇಂದು ಪಿ. ಎಂ.ಪ್ರಸನ್ನ ಅಧ್ಯಕ್ಷರಾಗಿ  ಉತ್ತರ ನೀಡುತ್ತಿದ್ದಾರೆ ಎಂದು ಶಾಸಕ ಕೆ. ಮಹದೇವ್ ಶ್ಲಾಘಿಸಿದರು. ತಾಲೂಕಿನ ಹಿಟ್ನಹಳ್ಳಿ, ಹಸುವಿನ ಕಾವಲು ಮತ್ತು ಕೌಲನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.  ಈ ಹಿಂದೆ ಪಿ.ಎಂ. ಪ್ರಸನ್ನ ಮೈಮುಲ್ ನಿರ್ದೇಶಕನಾಗ ಬಾರದು ಎಂದು ಕೆಲವು ವಿರೋಧಿಗಳು ಕುಯುಕ್ತಿ ಮಾಡಿ ಇಲ್ಲಸಲ್ಲದ ಆರೋಪ ಮಾಡಿ ನಿರ್ದೇಶಕನಾಗಲು ಅಡ್ಡಗಾಲು ಹಾಕಿದ್ದರು ಆದರೆ ಇದಕ್ಕೆ ಪಿ.ಎಂ. ಪ್ರಸನ್ನ ರವರನ್ನು ನಿರ್ದೇಶಕರಾಗಿ ತಾಲ್ಲೂಕಿನ ಜನತೆ ಆಯ್ಕೆ ಮಾಡಿದರು, ಇದರ ಜೊತೆಗೆ ಇಂದು ಎರಡನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆ ಮಾಡಿ ಅಧ್ಯಕ್ಷನಾಗಿ ಅವಕಾಶ ಕಲ್ಪಿಸಿದರು. ಇದಕ್ಕೆ ಚಿರಋಣಿಯಾಗಿದ್ದೇವೆ. ಇದರಿಂದ ಹಾಲು ಉತ್ಪಾದಕರಿಗೆ ಉತ್ತಮ ಯೋಜನೆಗಳನ್ನು ಜಾರಿಗೆ ತಂದು ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.  ಜಿಲ್ಲೆಯಲ್ಲಿ 39,000 ಮತ್ತು ತಾಲ್ಲೂಕಿನಲ್ಲಿ 11,000 ಹಸುಗಳಿಗೆ ವಿಮೆ ಮಾಡಿಸಿ ಮೈಮುಲ್ ಯಶಸ್ವಿಯಾಗಿದೆ.ಸರ್ಕಾರ ಇಲ್ಲದಿದ್ದರೂ ಕೂಡ ನಾನು ತಾಲೂಕಿನ ಅಭಿವೃದ್ಧಿಗೆ ಅನುದಾನವನ್ನು ತಂದು  ಶ್ರಮಿಸುತ್ತಿದ್ದೇನೆ ಇದನ್ನು ತಾಲೂಕಿನ ಜನತೆ ಅರ್ಥೈಸಿಕೊಳ್ಳಬೇಕು. ನಾನು  ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ  ಅನುದಾನ ಬಿಡುಗಡೆ ಮಾಡಿಸಿ ಇಂದು  ಕಾರ್ಯಗತವಾಗಿದೆ. ಅತೀ ಶೀಘ್ರದಲ್ಲಿಯೇ ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಮೊದಲಿಗೆ 75 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಮತ್ತು 225  ಕೋಟಿ ಅನುದಾನದಲ್ಲಿ ಪ್ರತಿ ಗ್ರಾಮಗಳಿಗೆ ಶುದ್ಧಕುಡಿಯುವ ಕಾವೇರಿ ನೀರಿನ ಸರಬರಾಜಿಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. 

ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ ತಾಲೂಕಿನಲ್ಲಿ 180 ಹಾಲು  ಉತ್ಪಾದಕರ ಸಹಕಾರ ಸಂಘವಿದ್ದು ಪ್ರತಿ ಸಂಘಕ್ಕೂ ಕಟ್ಟಡ ನಿರ್ಮಿಸಲು ಅನುದಾನ ನೀಡಿ ಮೂಲಭೂತ ಸೌಲಭ್ಯ ಒಕ್ಕೂಟ ಕಲ್ಪಿಸುತ್ತಿದೆ. ಆಧುನಿಕ ತಂತ್ರಜ್ಞಾನಗಳನ್ನು ಕಟ್ಟಡದಲ್ಲಿ ಬಳಸಲಾಗಿದ್ದು 1 ಕೋಟಿ 15 ಲಕ್ಷ ರೂ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟ ನೀಡಿದೆ. ಪ್ರತಿ ಒಂದು ಲೀಟರ್ ಹಾಲಿಗೆ 27 ರೂ ಪ್ರೋತ್ಸಾಹ ಧನ ಒಕ್ಕೂಟ ನೀಡುತ್ತಿದ್ದು, ಇತರೆ ಯಾವುದೇ ರಾಜ್ಯದಲ್ಲಿ ಇಷ್ಟು ಪ್ರೋತ್ಸಾಹ ಧನ  ನೀಡುತ್ತಿಲ್ಲ. ಆದ್ದರಿಂದ ಹಾಲು ಉತ್ಪಾದಕರು ಮೈಮುಲ್ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

 ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಎಚ್.ಡಿ ರಾಜೇಂದ್ರ, ತಹಸಿಲ್ದಾರ್ ಚಂದ್ರಮೌಳಿ,ಗ್ರಾಪಂ ಅಧ್ಯಕ್ಷೆ ಮೀನಾಕ್ಷಮ್ಮ, ಸದಸ್ಯರಾದ ರವಿಕುಮಾರ್, ಯಶೋದಮ್ಮ, ಎ.ಟಿ. ರಂಗಸ್ವಾಮಿ, ರಘುನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಎಇಇ ಜಯಂತ್, ಮಂಜುನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಸಂತೋಷ್, ಪಶುಪಾಲನಾ ಇಲಾಖೆ ಅಧಿಕಾರಿ ಸೋಮಯ್ಯ,ಗ್ರಾ ಪಂ ಅಭಿವೃದ್ಧಿ ಅಧಿಕಾರಿ ದೇವರಾಜ್,ಸಂಘದ ವಿಸ್ತರಣಾ ಅಧಿಕಾರಿ ನಿಶ್ಚಿತ್, ಶ್ರೀಕಾಂತ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಷೇಕ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top