ತಾಲೂಕಿನ ಅಭಿವೃದ್ಧಿಗೆ ನನ್ನ ಶಕ್ತಿ ಮೀರಿ ಶ್ರಮಿಸಿದು ತಾಲೂಕಿನಲ್ಲಿ ಹಿಂದೆ ಇದ್ದ ಯಾವ ಶಾಸಕರು ಮಾಡದಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ ಎಂದು ಶಾಸಕ ಕೆ ಮಹದೇವ್ ತಿಳಿಸಿದರು.

ಪಿರಿಯಾಪಟ್ಟಣ: ತಾಲೂಕಿನ ಅಭಿವೃದ್ಧಿಗೆ ನನ್ನ ಶಕ್ತಿ ಮೀರಿ ಶ್ರಮಿಸಿದು ತಾಲೂಕಿನಲ್ಲಿ ಹಿಂದೆ ಇದ್ದ ಯಾವ ಶಾಸಕರು ಮಾಡದಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ ಎಂದು ಶಾಸಕ ಕೆ ಮಹದೇವ್ ತಿಳಿಸಿದರು.
ತಾಲೂಕಿನ ಚೌತಿ ಮಾಲಂಗಿ ಹಾಗೂ ಮುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು  ಶಾಸಕನಾದವರು ಜನರ ಸೇವಕನಾಗಿ ಕೆಲಸ ಮಾಡಬೇಕು ಆದರೆ ಹಿಂದೆ ಅಧಿಕಾರ ಅನುಭವಿಸಿದ್ದವರು ಜನರ ಮಧ್ಯೆ ಇರದೆ ವರ್ಷಕ್ಕೊಮ್ಮೆ ಜನಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದರು. ಅವರನ್ನು ನೋಡಲು ವರ್ಷಗಟ್ಟಲೆ ಬೇಕಿದ್ದು ಆದರೆ ನಾನು ಪ್ರತಿನಿತ್ಯ ತಮ್ಮ ಸೇವಕನಾಗಿ ಸುಲಭವಾಗಿ ಸಾರ್ವಜನಿಕರ ಸೇವೆಗೆ ಸಿಗುತ್ತಿದ್ದೇನೆ ನನ್ನಂತಹ ಶಾಸಕನನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸದಿದ್ದರೆ ನಿಮಗೆ ನೀವೇ ಮೋಸ ಮಾಡಿಕೊಂಡಂತೆ  ವಿರೋಧಿಗಳ ಟಿ ಕೆ ಟಿಪ್ಪಣಿಗೆ ಹೆದರದೆ ಅಪಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಕಾರ್ಯಕರ್ತರ ಬಾಯಿ ಮುಚ್ಚಿಸುವ ಕೆಲಸವನ್ನು ಜೆಡಿಎಸ್ ಕಾರ್ಯಕರ್ತರು ಮಾಡಬೇಕು ನಾನು ಈ ತಾಲೂಕಿನ ಎಲ್ಲಾ ಪಕ್ಷದವರಿಗೂ ಭೇದ ಭಾವ ಮಾಡದೇ ಸಹಾಯ ಮಾಡಿದ್ದೇನೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಮರು ಆಯ್ಕೆ ಮಾಡಿದ್ದಲ್ಲಿ ನಿಮ್ಮ ಋಣ ತೀರಿಸುತ್ತೇನೆ ಈ ಹಿಂದೆ ಕುಮಾರಸ್ವಾಮಿಯವರು ಮೋಸಗಾರರದ ಕಾಂಗ್ರೆಸ್ ನವರೊಂದಿಗೆ ಕೈಜೋಡಿಸಿ ಮೋಸ ಹೋದರು ,,ಅವರನ್ನು ಮುಖ್ಯಮಂತ್ರಿ ಆಗಿ ಮಾಡಿ ಕೆಳಗಿಳಿಯುವವರೆಗೂ ನಿದ್ರೆ ಮಾಡಲಿಲ್ಲ ಅದೇ ರೀತಿ ಕಾಂಗ್ರೆಸ್ ಪಕ್ಷದ ಶಾಸಕರನ್ನೇ ಬಿಜೆಪಿ ಪಕ್ಷಕ್ಕೆ ಕಳುಹಿಸಿ ಮೋಸ ಮಾಡಿದರು ಅಂತಹ ಪಕ್ಷದಿಂದ ಸ್ಪರ್ಧಿಸುವ ಮಾಜಿ ಶಾಸಕರನ್ನ ದೂರವಿಡಿ ನಿಮ್ಮ ಕೈಗೆ ಸಿಗುವ ಶಾಸಕನನ್ನ ಆಯ್ಕೆ ಮಾಡಿ ಎಂದು ತಿಳಿಸಿದರು.


 ನಂತರ ಮಾತನಾಡಿದ್ದ ಮೈಮುಲ್ ಅಧ್ಯಕ್ಷ ಪಿ ಎಂ ಪ್ರಸನ್ನ ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ ಆದರೂ ಈ ರಾಜ್ಯದಲ್ಲಿ ರೈತರ ಪರವಾಗಿ ಹೋರಾಟ ಮಾಡುತ್ತಿದ್ದು  ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದು ಬಡವರ ದಿನ ದಲಿತರ ಪರವಾಗಿ  ಧ್ವನಿ ಎತ್ತುವ ನಾಯಕರಾಗಿದ್ದು ಅವರ ಪರವಾಗಿ ಮತ್ತು ಅವರನ್ನು ಮುಖ್ಯಮಂತ್ರಿ ಮಾಡಲು ಈ ತಾಲೂಕಿನಲ್ಲಿ ಶಾಸಕ ಕೆ ಮಹದೇವರನ್ನು ಗೆಲ್ಲಿಸಲು ನಾವೆಲ್ಲರೂ ಪಣತೊಡಬೇಕು ಎಂದು ಮೈಮುಲ್ ಅಧ್ಯಕ್ಷ ಪಿಎಂ ಪ್ರಸನ್ನ ತಿಳಿಸಿದರು, ತಾಲೂಕಿನ ಹಬಟೂರು ಕೊಪ್ಪಲು ಗ್ರಾಮದಲ್ಲಿ, ಚೌತಿ, ಮುತ್ತೂರು’ ಮಾಲಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಮಾವೇಶ ದಲ್ಲಿ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಅವರು, ಈ ರಾಜ್ಯದಲ್ಲಿ ಏಕೈಕ ಪ್ರಾದೇಶಿಕ ಪಕ್ಷ ಉಳಿದಿರುವುದು ಅದು ಕೇವಲ ಜೆಡಿಎಸ್ ಪಕ್ಷ ಮಾತ್ರ ರೈತ ಪರವಾಗಿದಂತಹ ನಿಲುವನ್ನು ಹೊಂದಿರುವ ಕಾರಣದಿಂದ ಈ ಪಕ್ಷ ಇನ್ನು ಬೃಹತ್ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ ,ನಾಡಿನ ಜನ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಜೆಡಿಎಸ್ ಪಕ್ಷಕ್ಕೆ ಬಹುಮತ ನೀಡಿದಲ್ಲಿ ಮಾತ್ರ ಸಾಧ್ಯ ನಮ್ಮ ತಂದೆ ಶಾಸಕರಾಗಿ ಮಹದೇವ್ ಈ ತಾಲೂಕಿನಲ್ಲಿ ಹಿಂದೆಂದೂ ಅಭಿವೃದ್ಧಿ ಕಾಣದಂತಹ ರಸ್ತೆಗಳ ಅಭಿವೃದ್ಧಿಯಲ್ಲಿ ಮತ್ತು ಮೂಲಭೂತ ಸೌಕರ್ಯಗಳನ್ನು ಸಾಮಾನ್ಯ ಜನರಿಗೆ ಕೊಡುವ ನಿಟ್ಟಿನಲ್ಲಿ ಸಾವಿರಾರು ಕೋಟಿ ಅನುದಾನ ತಂದು ಈ ತಾಲೂಕಿನ ಎಲ್ಲರ ವಿಶ್ವಾಸವನ್ನು ಕಳಿಸಿರುವುದು ಹೆಮ್ಮೆ, ಆದರೆ 30 ವರ್ಷಗಳ ಆಳ್ವಿಕೆ ನಡೆಸಿ ದೊರೆಯ ತರ ಜೀವನ ನಡೆಸಿದ ಮಾಜಿ ಶಾಸಕ ಕೆ ವೆಂಕಟೇಶ ಜನರನ್ನು ವಿಶ್ವಾಸ ಗಳಿಸದೆ ಅವರ ಕೈಗೂ ಕೂಡ ಸಿಗುತ್ತಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಅಪ್ಪ ಮಕ್ಕಳಿಬ್ಬರು ಎಲ್ಲರ ಮನೆ ಬಾಗಿಲಿಗೆ ಭೇಟಿ ನೀಡುತ್ತಾ ಈ ತಾಲೂಕಿನ ಜನರು ತುಂಬಾ ವಿಶ್ವಾಸ ಪ್ರಿಯರು, ವಿಶ್ವಾಸ ಎಲ್ಲದಿದ್ದರೆ ಜನಪದ ಕೆಲಸ ಮಾಡಲು ಸಾಧ್ಯವಿಲ್ಲ ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಲಕ್ಷಾಂತರ ಕೋಟಿ ರೂಗಳ ಸಾಲ ಮಾಡಿ ಹೋಗಿದ್ದು ಅದು ಪ್ರತಿಯೊಬ್ಬರ ಮೇಲೆ ಬೀಳಲಿದೆ, ಇತ್ತೀಚಿಗೆ ಬಂದು ತಮ್ಮ ಕಾಲಿಗೆ ಬೀಳುವ ಮಾಜಿ ಶಾಸಕರನ್ನು ದೂರವಿಡಿ ಎಂದು ತಿಳಿಸಿದರು,  ತಿಳಿಸಿದರು ,


 ಈ ಸಂದರ್ಭದಲ್ಲಿ  ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದ ರಾಮಚಂದ್ರು ಮಾತನಾಡಿದರು, ಕಾರ್ಯಕ್ರಮದಲ್ಲಿ    , ಮೈಮುಲ್ ಸದಸ್ಯ ರಾಜೇಂದ್ರ,      ಎಂ ಡಿ ಸಿ ಸಿ   ಬ್ಯಾಂಕ್ ನಿರ್ದೇಶಕ ಸಿ ಎನ್ ರವಿ,    ತಾಲೋಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಪುರಸಭೆ ಅಧ್ಯಕ್ಷ ಮಹೇಶ,,  ಮಾಜಿ ತಾ.ಪಂ ಸದಸ್ಯ ,   ಐಲಾಪುರ ರಾಮು, ರಘುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಗೌರಮ್ಮ, ಜ್ಯೋತಿ ನಟೇಶ್,  ಗ್ರಾಮ ಪಂಚಾಯಿತಿ ಉಪಾಧ್ಯಕ್ಷರುಗಳಾದ ಲಕ್ಷ್ಮಣ್ ಪಟೇಲ್,  ಗ್ರಾಮ ಪಂಚಾಯಿತಿ ಸದಸ್ಯ ರವಿಚಂದ್ರ,     ಟಿ ಎ ಪಿ ಸಿ ಎಂ  ಅಧ್ಯಕ್ಷ ದೊರೆಕೆರೆ ನಾಗೇಂದ್ರ, ಜೆಡಿಎಸ್ ಮುಖಂಡರಾದ  ಶಿವರಾಜು, ಸುರೇಶ್,  ಹೇಮಂತ್,  ಕರಡಿಪುರ ಕುಮಾರ್,  ಜಿ ಶಂಕರ್,  ತಿಮ್ಮನಾಯಕ ಮತ್ತು ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top