ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡಹೊನ್ನೂರು ಗ್ರಾಮದಲ್ಲಿ ಅಂಬೇಡ್ಕರ್ ಅಭಿಮಾನಿ ಸೇನೆಯ ಮಹಿಳಾ ಗ್ರಾಮ ಘಟಕ ಉದ್ಘಾಟನೆ ಹಾಗೂ ಭೀಮಾ ಕೋರೆಗಾಂವ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್ ಮಾತನಾಡಿದರು. 01/01/2022

 ಡಾ.ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡಹೊನ್ನೂರು ಗ್ರಾಮದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಮಹಿಳಾ ಗ್ರಾಮ ಘಟಕ ಉದ್ಘಾಟನೆ ಹಾಗೂ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಬಾಲ್ಯದಿಂದಲೇ ಸಮಾಜದಲ್ಲಿನ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಟ ಮಾಡಿ ಜನರಿಗೆ ಅರಿವು ಮೂಡಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಸಂಘಟನೆ ಸ್ಥಾಪಿತವಾಗಿ ಸಮಾಜಪರ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್.ಆರ್ ಕಾಂತರಾಜು ಮಾತನಾಡಿ ಭೀಮಾ ನದಿ ತೀರದಲ್ಲಿನ ಕೋರೆಂಗಾವ್ ಪ್ರದೇಶದಲ್ಲಿ ಪೇಷ್ವೆಗಳು ಹಾಗೂ ಮಹರ್ ಸೈನಿಕರ ನಡುವೆ ನಡೆದ ಯುದ್ಧದಲ್ಲಿ ಇಪ್ಪತ್ತೆಂಟು ಸಾವಿರ ಸೈನಿಕರು ಸೋತು ಐನೂರು ಜನ ಮಹಾರ್ ಸೈನಿಕರು ವಿಜಯಶಾಲಿಯಾಗುವ ನೆನಪಿನ ನಿಟ್ಟಿನಲ್ಲಿ ಆ ಸ್ಥಳದಲ್ಲಿ 65 ಅಡಿ ಎತ್ತರದ ವಿಜಯಸ್ತಂಭ ಸ್ಥಾಪನೆಯಾಗಿ ಇಂದಿಗೆ 204 ವರ್ಷ ಗತಿಸಿದ್ದು ಆ ಯುದ್ಧವನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ಸ್ವಾಭಿಮಾನದ ಯುದ್ಧ ಎಂದು ಕರೆದರು ಎಂದು ಮಾಹಿತಿ ನೀಡಿದರು.ಉಪನ್ಯಾಸಕ ಪುಟ್ಟಕವಿ ಪುಟ್ಟಮಾದಯ್ಯ ಅವರು ಮಾತನಾಡಿ ದಮನಿತರು ಮತ್ತು ಶೋಷಿತರ ನಡುವಿನ ಸಮರವೇ ಕೋರೆಂಗಾವ್ ಘಟನೆಯಾಗಿದ್ದು ಸರ್ವರಿಗೂ ಸಮಪಾಲು ಸಮಬಾಳು ನೀಡುವ ನಿಟ್ಟಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಸಮಾಜದ ಬದಲಾವಣೆಗೆ ಶ್ರಮಿಸಿದರು ಎಂದರು.ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಎಂ.ಕೆ ಕಾಂತರಾಜು ಅವರು ಮಾತನಾಡಿ ಸಂಘದ ವತಿಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಕೊರೋನಾ ಸೋಂಕು ಸಂದರ್ಭದಲ್ಲಿಯೂ ವಾರಿಯರ್ಸ್ ಗಳಿಗೆ ಕೈಲಾದ ಸಹಾಯ ಮಾಡಿ ಅನ್ಯಾಯದ ವಿರುದ್ಧ ಹೋರಾಟ ಮಾಡಲಾಗುತ್ತಿದೆ ಎಂದರು. 

ಬೆಣಗಾಲು ಗ್ರಾ.ಪಂ ಉಪಾಧ್ಯಕ್ಷ ಧನರಾಜ್, ಕುವೆಂಪು ಜನಜಾಗೃತಿ ಸಂಘದ ಅಧ್ಯಕ್ಷ ಜೆ.ಪಿ ಕುಮಾರ್, ದಲಿತ ಮುಖಂಡ ಸಿ.ತಮ್ಮಣ್ಣಯ್ಯಾ ಮಾತನಾಡಿದರು.   ಈ ಸಂದರ್ಭ ಮುಖಂಡರಾದ ಜಯಂತಿ ಸೋಮಶೇಖರ್, ಹೊನ್ನೂರಯ್ಯ, ಗೋಪಾಲ್, ರಘು, ಸಿ.ಎಸ್ ವೆಂಕಟೇಶ್, ಚನ್ನಬಸವ, ರತ್ನಮ್ಮ, ಚೇತನ್, ರವಿ, ಲೋಕೇಶ್, ಅಭಿಲಾಷ್, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಸುಜಾತಾ, ಕಾರ್ಯಾಧ್ಯಕ್ಷೆ  ಮಂಜುಳಾ, ಕಾರ್ಯದರ್ಶಿ ಗೌರಮ್ಮ ಮತ್ತು ಸದಸ್ಯರು ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top