ಪಿರಿಯಾಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಭೂಮಾಪನ ಮತ್ತು ಕಂದಾಯ ಇಲಾಖೆ ನೌಕರರ ಸಂಘದ 2021ನೇ ವರ್ಷದ ದಿನಚರಿಯನ್ನು ಶಾಸಕ ಕೆ.ಮಹದೇವ್ ಬಿಡುಗಡೆ ಮಾಡಿದರು.02/03/2021

ಪಿರಿಯಾಪಟ್ಟಣ: ಕಂದಾಯ ಮತ್ತು ಭೂಮಾಪನ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶಾಸಕ ಕೆ.ಮಹದೇವ್ ಬಣ್ಣಿಸಿದರು. ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಕಂದಾಯ ಮತ್ತು ಭೂಮಾಪನ ಇಲಾಖೆ ನೌಕರರ ಸಂಘಗಳ 2021ನೇ ವರ್ಷದ ದಿನಚರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು, ಎರಡೂ ಇಲಾಖೆಗಳ ಮೇಲಧಿಕಾರಿಗಳು ಹಾಗೂ ಸಿಬ್ಬಂದಿ ಫೋಟೋ ಸಮೇತ ದೂರವಾಣಿ ಸಂಖ್ಯೆ ಮುದ್ರಿಸಿ ದಿನಚರಿ ಹೊರತಂದಿರುವುದು ಶ್ಲಾಘನೀಯ, ರೈತರ ಅತಿ ಹೆಚ್ಚು ಸಮಸ್ಯೆಗಳು ಕಂದಾಯ ಮತ್ತು ಭೂ ಇಲಾಖೆ ಸಂಬಂಧಿಸಿರುವುದರಿಂದ ಅವುಗಳನ್ನು ಪರಿಹರಿಸಲು ಅಧಿಕಾರಿಗಳು ವಿಳಂಬನೀತಿ ತೋರದೆ ಎರಡೂ ಇಲಾಖೆಯವರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಸಮಸ್ಯೆ ಬೇಗ ಬಗೆಹರಿಯುವುದರಿಂದ ನಮಗೂ ಒಳ್ಳೆಯ ಹೆಸರು ಸಿಗುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ಕಂದಾಯ ಮತ್ತು ಭೂಮಾಪನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಯಾವುದೇ ದೂರುಗಳು ಬಾರದಂತೆ ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿಯೂ ತಾಲ್ಲೂಕಿನ ಅಭಿವೃದ್ಧಿ ವಿಚಾರವಾಗಿ ಎರಡೂ ಇಲಾಖೆಗಳ ಸಹಕಾರ ಅತ್ಯಗತ್ಯ ಎಂದರು.

ಡಿಡಿಎಲ್ಆರ್ ಸೀಮಂತಿನಿ ಮಾತನಾಡಿ ಇಲಾಖೆ ವತಿಯಿಂದ ಹೊಸದಾಗಿ ನೂತನ ತಂತ್ರ ಜ್ಞಾನಗಳನ್ನು ಬಳಸಿ ರೈತರು ಮತ್ತು ಸಾರ್ವಜನಿಕರ ಸರ್ವೆ ಸಂಬಂಧಿತ ಸಮಸ್ಯೆಗಳನ್ನು ವಿಳಂಬ ಮಾಡದೆ ಶೀಘ್ರ ಪರಿಹರಿಸಲಾಗುತ್ತಿದೆ ಎಂದರು.

ಎ.ಡಿ.ಎಲ್ಆ.ರ್ ಎಂ.ಜಿ ಚಿಕ್ಕಣ್ಣ ಮತ್ತು ಭೂಮಾಪನ ಕಾರ್ಯನಿರ್ವಾಹಕ ನೌಕರರ ಸಂಘದ ಮೈಸೂರು ವಿಭಾಗೀಯ ಉಪಾಧ್ಯಕ್ಷ ಎಂ.ಕೆ ಪ್ರಕಾಶ್ ಮಾತನಾಡಿ ಇಲಾಖೆ ಸಿಬ್ಬಂದಿಗಳ ಉತ್ತಮ ಸಹಕಾರ ಮತ್ತು ಕಂದಾಯ ಇಲಾಖೆ ಸಮನ್ವಯತೆಯಿಂದ ತಾಲೂಕಿನಲ್ಲಿ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಗಳಾದ ಟ್ರಿಜಾ, ವಿನೋದ್, ಉಪ ತಹಸೀಲ್ದಾರ್ ಗಳಾದ ಕೆಂಚಯ್ಯ, ಶಶಿಧರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಕಂದಾಯಾಧಿಕಾರಿ ಎನ್.ಕೆ ಪ್ರದೀಪ್, ನಿರ್ದೇಶಕ ಗ್ರಾಮಲೆಕ್ಕಾಧಿಕಾರಿ ನಿರಂಜನ್ ಮೆ೦ದ್ರಗುತ್ತಿ, ಸರ್ಕಲ್ ಇನ್ಸ್ ಪೆಕ್ಟರ್ ಜಗದೀಶ್, ಕಂದಾಯಾಧಿಕಾರಿಗಳಾದ ಪಾಂಡುರಂಗ, ಶ್ರೀಧರ್, ಆನಂದ್, ಭೂಮಾಪನ ಇಲಾಖೆ ಅಧೀಕ್ಷಕ ಜಿ.ಮುನಿಯಪ್ಪ, ಸೂಪರ್ ವೈಸರ್ ಎಂ.ಮಂಜುನಾಥ್ ಸೇರಿದಂತೆ ಭೂ ಮಾಪನ ಇಲಾಖೆ ಸಿಬ್ಬಂದಿ ಮತ್ತು ತಾಲ್ಲೂಕಿನ ವಿವಿಧೆಡೆ ಗ್ರಾಮಲೆಕ್ಕಾಧಿಕಾರಿಗಳು ಹಾಜರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top