ಪಿರಿಯಾಪಟ್ಟಣ ತಾಲೂಕಿನ ರಾಣಿಗೆ ಗಿರಿಜನ ಹಾಡಿಯಲ್ಲಿ ರಾಜ್ಯ ಸೋಲಿಗರ ಅಭಿವೃದ್ಧಿ ಸಂಘದ ಕಾರ್ಯಕಾರಿಣಿ ಸಭೆಯನ್ನು ಏರ್ಪಡಿಸಲಾಗಿತ್ತು. 02/03/2021

ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು ಗಿರಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ತಡವಾಗಿಯಾದರೂ ಆಗುತ್ತಿರುವುದು ಉತ್ತಮ ಬೆಳವಣಿಗೆ, ಹಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಿದ ಸರ್ಕಾರದ ಕ್ರಮಗಳನ್ನು ಪ್ರಶ್ನಿಸಿ ಕಳೆದ ಬಾರಿ ವಿಧಾನಸಭೆಯ ಕಲಾಪದಲ್ಲಿ ಚರ್ಚಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಮುಂದಿನ ದಿನಗಳಲ್ಲಿ ಹಂತಹಂತವಾಗಿ ತಾಲೂಕಿನಲ್ಲಿರುವ ಗಿರಿಜನರಿಗೆ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದೆ, ಗಿರಿಜನರು ಸೌಲಭ್ಯ ವಂಚಿತ ರಾಗಿರುವ ಬಗ್ಗೆ ನನಗೆ ಸಂಪೂರ್ಣ ಅರಿವಿದೆ, ಈ ಭಾಗದಲ್ಲಿ ಗಿರಿಜನರ ಜಮೀನುಗಳಿಗೆ ನೀರು ನೀಡುವ ದೃಷ್ಟಿಯಿಂದ ನಾಲ್ಕು ಕೋಟಿ ರೂ ವೆಚ್ಚದಲ್ಲಿ ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

ನಂತರ ರಾಜ್ಯ ಸೋಲಿಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ ರಾಜ್ಯದಲ್ಲಿರುವ 9 ಪಂಚಾಯಿತಿಗಳಲ್ಲಿ ಸೋಲಿಗ ಜನಾಂಗದವರು ಒಂದುವರೆ ಲಕ್ಷ ಜನಸಂಖ್ಯೆಯಿದ್ದು ತೀರ ಶೋಚನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದರು. ಜಮೀನು ದುರಸ್ತಿ ಅರಣ್ಯ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನ ಸಮರ್ಪಕ ಶಿಕ್ಷಣ ರಾಜಕೀಯ ಸೂಕ್ತ ಸ್ಥಾನಮಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸಂಘಟನೆಯು ಕಾರ್ಯನಿರತವಾಗಿದೆ ಎಂದು ತಿಳಿಸಿದರು. ಪಿರಿಯಾಪಟ್ಟಣ ತಾಲೂಕಿನಲ್ಲಿರುವ 48 ಹಾಡುಗಳ ಪೈಕಿ 17 ಹಾಡಿಗಳಲ್ಲಿ ಸುಮಾರು ಐದು ಸಾವಿರ ಜನರು ವಾಸಿಸುತ್ತಿದ್ದು, ಇವರ ಬದುಕು ಸಂಕಷ್ಟದಲ್ಲಿದೆ ಶಾಸಕರು ಇವರ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಮುಖ್ಯಸ್ಥ ಡಾಕ್ಟರ್ ಪ್ರಶಾಂತ್, ಬೆಂಗಳೂರಿನ ಪರಿಸರ ಮತ್ತು ವಿಜ್ಞಾನ ಸಂಶೋಧಕ ಡಾಕ್ಟರ್ ಆರ್ ಸಿದ್ದಪ್ಪ ಶೆಟ್ಟಿ, ಡಾಕ್ಟರ್ ಎಂ ಜಡೇಗೌಡ, ಬಸವರಾಜು ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಂಬಿಸಿಸಿ ಬ್ಯಾಂಕ್ ನಿರ್ದೇಶಕ ಸಿ ಎಂ ರವಿ, ತಾಲೂಕು ಪಂಚಾಯಿತಿ ಸದಸ್ಯ ಮುತ್ತ, ತಾಲೂಕು ಸೋಲಿಗರ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ, ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಸ್ವಾಮಿ, ಉಪಾಧ್ಯಕ್ಷ ಸಿಂದು, ಸದಸ್ಯರಾದ ಪೂರ್ಣಿಮ, ಮಲ್ಲಮ್ಮ, ಶಾಂತಮ್ಮ, ಚಾಮರಾಜನಗರ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಕಾರ್ಯದರ್ಶಿ ಡಾಕ್ಟರ್ ಸಿ ಮಾದೇಗೌಡ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ, ಬಿಕೆ ಮೋಹನ್ ಸಿದ್ದಲಿಂಗಯ್ಯ ಕಾರ್ಯದರ್ಶಿ ಶಾಂತರಾಜ್ ಖಜಾಂಚಿ ಸೋಮಶೇಖರ್ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top